ಓ ಮನಸೇ

ಓ ಮನವೇ ಸ್ವಲ್ಪ ಸುಮ್ಮನಿರು
ಏನನ್ನು ನೀನು ಹೇಳದಿರು
ಅರಿಯದೆ ತಪ್ಪು ಮಾಡದಿರು

ಎಂದಿಗೂ ನಿ ತಿಳಿದಿರು
ಅಡುವವರ ಮಾತಿಗೆ ಕಿವಿಗೊಡದಿರು
ಕೆಟ್ಟ ಮಾತಿಗೆ ಮನ ಸೋಲದಿರು

ಹಲವರು ಮುಖವಾಡ ಧರಿಸಿದವರು
ಅವರ ನಗುವ ಮೊಗವನ್ನು ನಂಬದಿರು
ಪ್ರೀತಿಯ ಬಲೆಯಲ್ಲಿ ಬೀಳದಿರು
ತಿಳಿದು ತಿಳಿಯದೆಯೋ ಯಾರ
ಮನಸನ್ನು ನೋಯಿಸದಿರು

ನಂಬಿದವರ ಕೈ ಬಿಡದಿರು
ನಿನ್ನ ಸೃಷ್ಟಿಸಿದ ದೇವರಿಗೆ
ಮನಕಲುಕುವ ಹಾಗೆ ಮಾಡದಿರು
ಓ ಮನವೇ ನಡೆದು ಹೋದ ಕಾಲವನ್ನು
ನೆನೆದು ದುಃಖ ಪಡದಿರು

ಮನಸ್ಸಿನ ಕನ್ನಡಿ

ಮನಸು ಎಂಬ ಕನ್ನಡಿಯಲ್ಲಿ
ನಿ ನೋಡ ಬಯಸಿದ್ದು ಪ್ರೀತಿ ಮಾತ್ರ!!

ನಿ ನೋಡಿದ ಕನ್ನಡಿಯಲ್ಲಿ ನಿನಗೆ
ಕಂಡಿದ್ದು ಬರಿ ನಿನ್ನ ಪ್ರತಿಬಿಂಬ ಮಾತ್ರ!!

ಪ್ರೀತಿಯ ಹುಡುಕಿ ಹೋರಟ ನಿನಗೆ
ಕೇವಲ ಸಿಕ್ಕದ್ದು ಬರಿ ನೋವು ಮಾತ್ರ!!

ಆ ನೋವು ತುಂಬಿದ ಮನಸಿನಲ್ಲಿ
ನಿನಗೆ ಉಕ್ಕಿ ಹರಿದದ್ದು ಕಣ್ಣೀರು ಮಾತ್ರ!!

ಹೃದಯ ಭರಿತ ನೋವನ್ನು ಆಪ್ತರಲ್ಲಿ
ಹೇಳಿಕೊಂಡಾಗ ನಿನಗೆ ಸಿಕ್ಕದ್ದು
ಹಾಸ್ಯದ ಟೀಕೆಗಳು ಮಾತ್ರ!!

ಕೊನೆಗೆ ನಿನ್ನ ಮನಸು ಮಾತನಾಡಿದ್ದು
ಯಾರಿಗೂ ಹೇಳದೆ
ಸುಮ್ಮನಿರುವುದು ಮಾತ್ರ!!